ಓದುಗರಿಗೆ ಈ ಮಾಹಿತಿ ತಾಣಕ್ಕೆ ಸ್ವಾಗತ.
ಅಂತರ್ಜಾಲದಲ್ಲಿ ಸುಲಭವಾಗಿ ಕನ್ನಡವನ್ನು ಬಳಸಬೇಕೆಂಬ ಉದ್ದೇಶದಿಂದ ಒಂದು ಪ್ರಾಯೋಗಿಕ ಕಾರ್ಯವನ್ನು ಕೈಗೊಂಡಿದ್ದೇವೆ. ಯಾವುದೇ ತಂತ್ರಾಂಶವನ್ನು ಬಳಸದೇ ನೇರವಾಗಿ ಅಂತರ್ಜಾಲ ಪುಟಗಳಲ್ಲಿ ಕನ್ನಡವನ್ನು ಬಳಸುವುದು ನಮ್ಮ ಪ್ರಯೋಗದ ಉದ್ದೇಶ. ಈ ಪ್ರಯೋಗ ಜನರಿಗೆ ತಲುಪಿದರೆ ಮುಂದೆ ಸಾರ್ವಜನಿಕ ಮಾಹಿತಿ ಕೇಂದ್ರಗಳಲ್ಲಿ ಕುಳಿತು ಇ-ಪತ್ರಗಳನ್ನು, ಪತ್ರಿಕೆಗಳಿಗೆ ಲೇಖನಗಳನ್ನು ಸುಲಭವಾಗಿ ಬರೆಯಬಹುದು.
ಇಲ್ಲಿಯವರೆಗೆ ನಾವು ಕನ್ನಡವನ್ನು ಬಳಸಲು ಬರಹದಂತಹ ತಂತ್ರಾಂಶದ ಅಗತ್ಯವಿತ್ತು. ಒಂದು ಪದವನ್ನು ಬರೆಯಲು ಮೂರು ನಾಲ್ಕು ಬಾರಿಯಾದರೂ ಶಿಫ಼್ಟ್ ಕೀಯನ್ನು ಬಳಸಬೇಕಿತ್ತು. ಇದರಿಂದ ಕನ್ನಡವನ್ನು ಕೀಲಿಸುವ ವೇಗ ಕುಂಟಿತಗೊಳ್ಳುತ್ತಿತ್ತು. ಇದನ್ನು ಉತ್ತಮಗೊಳಿಸಲು ಪ್ರಯತ್ನ ಮಾಡಲಾಗಿದೆ.
ಈ ಅಂತರ್ಜಾಲ ತಾಣದ ಉಪಯೋಗ ಪಡೆಯಲು "ಸ್ವರ ವ್ಯಂಜನ ಕೀಲಿಮಣೆ" ಪುಟವನ್ನು ಅಗತ್ಯವಾಗಿ ಓದಬೇಕಾಗುತ್ತದೆ.
ಈ ಅಂತರ್ಜಾಲ ತಾಣದಲ್ಲಿ ಮೂರು ಪ್ರಯೋಗಗಳನ್ನು ಕೈಗೊಳ್ಳಲಾಗಿದೆ.
೧. ಗೂಗಲ್ ನಲ್ಲಿ ನೇರವಾಗಿ ಕನ್ನಡದಲ್ಲಿ ಹುಡುಕಬಹುದು. ಇದಕ್ಕಾಗಿ ನೀವು ಮುಖಪುಟದಲ್ಲಿರುವ "ಸುಲಭ ಗೂಗಲ್" ನ ಮೇಲೆ ಕ್ಲಿಕ್ ಮಾಡಿ.
೨. ನಿಮಗಿಷ್ಟ ಬಂದ ವಿಷಯದ ಮೇಲೆ ಲೇಖನ ಬರೆಯಿರಿ. ಇದಕ್ಕಾಗಿ ಮುಖಪುಟದಲ್ಲಿರುವ "ಓದುಗರ ಬರಹ" ದ ಮೇಲೆ ಕ್ಲಿಕ್ ಮಾಡಿ. ನಿಮ್ಮ ಲೇಖನ ಈ ತಾಣದ ಬಗ್ಗೆಯೂ ಇರಬಹುದು.
೩. ನಿಮಗೆ ಅರ್ಥ ಗೊತ್ತಿರದ ಕನ್ನಡ ಪದಗಳನ್ನು ಓದುಗರಲ್ಲಿ ಕೇಳಿರಿ. ಅರ್ಥ ತಿಳಿದಿರುವ ಓದುಗರು ಅದನ್ನು ಈ ತಾಣದಲ್ಲಿ ದಾಖಲಿಸಬಹುದು.
ನಿಮ್ಮ ಸಲಹೆಗಳನ್ನು ಇದಕ್ಕೆ ಕಳುಹಿಸಿ
ಧನ್ಯವಾದಗಳು